antalya otogar rent a car ordu haberleri fatsa haberleri - instagram türk takipçi al instagram yavaş beğeni satın al Dış cephe temizliği ko-cuce ko-cuce

ಸಿಂಗಪುರ: ಹಾಲಿಮಾ ಮೊದಲ ಮಹಿಳಾ ಅಧ್ಯಕ್ಷೆ: ಹಾಲಿ ಸಂಸದೆ ಹಾಲಿಮಾ ಯಾಕೊಬ್‌ (63) ಅವರು ಸಿಂಗಪುರ ಅಧ್ಯಕ್ಷೆಯಾಗಿ ಆಯ್ಕೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಸಿಂಗಪುರ: ಹಾಲಿಮಾ ಮೊದಲ ಮಹಿಳಾ ಅಧ್ಯಕ್ಷೆ: ಹಾಲಿ ಸಂಸದೆ ಹಾಲಿಮಾ ಯಾಕೊಬ್‌ (63) ಅವರು ಸಿಂಗಪುರ ಅಧ್ಯಕ್ಷೆಯಾಗಿ ಆಯ್ಕೆ

Thursday, September 14 2017
img

ಸಿಂಗಪುರ (ಎಎಫ್‌ಪಿ)(www.asiavisionnews.com): : ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿಗಳನ್ನು ಅನರ್ಹಗೊಳಿಸಿದ್ದರಿಂದ ಮಾಜಿ ಸ್ಪೀಕರ್‌, ಹಾಲಿ ಸಂಸದೆ ಹಾಲಿಮಾ ಯಾಕೊಬ್‌ (63) ಅವರು ಸಿಂಗಪುರ ಅಧ್ಯಕ್ಷೆಯಾಗಿ ಬುಧವಾರ ಆಯ್ಕೆಯಾಗಿದ್ದಾರೆ.

ಈ ಸ್ಥಾನಕ್ಕೆ ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಇದೇ ಮೊದಲು.‌

ಯಾಕೊಬ್‌ ವಿರುದ್ಧ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ನಿಗದಿಪಡಿಸಿರುವ ಯಾವುದೇ ಮಾನದಂಡಗಳಿಗೆ ಅರ್ಹರಾಗಿಲ್ಲ ಎಂದು ಅಧಿಕಾರಿಗಳು ನಿರ್ಧರಿಸಿದರು. ಇದರಿಂದ ಯಾಕೊಬ್‌ ಅವರ ಆಯ್ಕೆ ಸುಗಮವಾಯಿತು.

ಹಾಲಿಮಾ, ಮುಸ್ಲಿಂ ಸಮುದಾಯದ ‘ಮಾಲೆ’ ಪಂಗಡಕ್ಕೆ ಸೇರಿದವರಾಗಿದ್ದಾರೆ.

ಚುನಾವಣೆ ನಡೆಸದೆ ಹಾಲಿಮಾ ಅವರನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿರುವುದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.

‘ಚುನಾವಣೆಯೇ ಇಲ್ಲದೆ ಆಯ್ಕೆಯೇ? ಇದು ಎಂಥಾ ಜೋಕ್‌’ ಎಂದು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಸಿಂಗಪುರದಲ್ಲಿ ಹಲವು ದಶಕಗಳಿಂದ ಪೀಪಲ್ಸ್‌ ಆ್ಯಕ್ಷನ್‌ ಪಾರ್ಟಿ ಆಡಳಿತ ನಡೆಸುತ್ತಿದ್ದು, ಚುನಾವಣಾ ನಿಯಮಗಳನ್ನು ತಿರುಚಿ ತಮಗೆ ಬೇಕಾದವರನ್ನು ಅಧಿಕಾರದಲ್ಲಿ ಕೂರಿಸುವುದು ಸಾಮಾನ್ಯವಾಗಿದೆ.

ಇದೇ ಪ್ರಥಮ ಬಾರಿಗೆ ‘ಮಾಲೆ’ ಸಮುದಾಯಕ್ಕೆ ಅಧ್ಯಕ್ಷ ಸ್ಥಾನವನ್ನು ಮೀಸಲಿಡುವ ಬಗ್ಗೆ ಅಧಿಕಾರಿಗಳು ನಿರ್ಧರಿಸಿದ್ದರು. ಜತೆಗೆ ಚುನಾವಣೆಯೂ ನಡೆಯಲಿಲ್ಲ. ಹೀಗಾಗಿ ಹಾಲಿಮಾ ಅವರ ಆಯ್ಕೆ ಪ್ರಕ್ರಿಯೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Comments